ABOUT US

ನಮ್ಮ ಪರಿಚಯ

Pandit Shri Totappayya Shastriji

ಪಂಡಿತ ವೇ. ಶ್ರೀ ತೋಟಪ್ಪಯ್ಯ ಶಾಸ್ತ್ರೀಜೀ ಹಿರೇಮಠ

Pandit Shri Totappayya shastriji an icon by himself in the field of Astrology, veda and Ayurveda. Born on 21.11.1900 to a renowned family of Tambralli Teginakeri Hiremath vedamurthy Mahatappayya.

He was the only son. He lost his mother at an early age but always thought that knowledge is power. This hope in knowledge made him a man of Astrology, Veda and Ayurveda. From his childhood a fire within him strived him to this successful stage. This fire within him was ignited by his father.

He is a self made personality. His strive for Knowledge made him to write his first Panchanga in his early age of 18 years. This brought him recognization at the local place, but he wanted Panchanga to reach the people of different areas. Then the only way he thought was publishing the Panchanga. Later he started publishing the Panchanga at his own unit Tontadarya Printing Press further this took the shape as Tontadarya Book Depot. This Book Depot highlighted about his books written on Astrology, Vedaanta and Ayurveda. The main intension was common people should know about the rich heritage of Veda, Astrology and Ayurveda and how these influence their life style.

With this hidden fire and Knowledge he spread his knowledge in different part of Karnataka and never the less in some parts of India.

In the year 1940 Panditji got married to Vishalaxambatai. C.Tambrallimath of kampli, This journey after marriage had new colours, fame and with more prestigious awards and respects from all walks of life. Vishalaxambatai extends her full support as a right hand and Backbone in all his ups and downs of life. This was the period where Panditji trained his wife with all the information about Astrology, Ayurveda and Vedaanta and moulded her to “Model of Saraswati”. This couple later gave birth to 3 daughters  Shashirekha, Jayashree and Nityamangala. Panditji compared each of them to Dhairya Laxmi,Vidya Laxmi, and Dhana Laxmi. In 1953 Panditji also registered himself at The Board of Ayurvedic and Unani Tibbi Systems of Medicine, Bombay which also added feathers in his hat. Tai Vishalaxamba and 3 daughters where his assests. He ended his journey of life on 20 August 1960. It was a dark day where Tai and 3 daughters lost this great personality Pandit. Totappayya Shastriji. The whole of Gadag was still, but life has to go on Smt. Vishalaxambatai with heavy heart with the teachings in her by Panditji were her strength.

Panditji’s legacy was continued by his wife Smt. Vishalaxambatai. She led the family by facing consequences that came in her way. 

Few years later she got her elder daughter Shashirekha married to her beloved brother Shri. Revanasiddeshwar Channabasayya Tambrallimath of Kampli, who followed the foot-steps of his sister and Panditiji. He never let down the dreams of Shastriji’s family. He up held  the family’s culture and business.

The other two daughters of Panditji where like children to Revanasiddeshwar.C.Tambrallimath and Shashirekha. Revanasiddeshwar Tambrallimath. Their future was trimmed by this God father like (Revanasiddeshwar C. Tambrallimath) personality.

Second daughter of Panditji Dr. Jayashree was married to Dr. Chandrakant Kodlimath.

Third daughter most loveable of the family Nityamangala was married to Shri. Gadigesh S. Patil of Yattinhalli keeping the traditional values of Panditji intact.

Shri Revanasiddeshwar C. Tambrallimath continued the tradition of family business. He took it to the next level by publishing to the latest standards. He marketed the books to the nook and corner of the state. As on today still the name and fame of Shri Totappayyashastriji is well known to everyone. This credit goes to Shri R. C. Tambrallimath(Appaji). Appaji left us in the year 2005. This legacy doesn’t stop here.

As per the guidelines and blessing of my Grand Mother (Smt. Vishalaxambatai T. Hiremath), my father (R. C. Tambrallimath) and mother (Shashirekha R. Tambrallimath) me Mr. PRASHANT R. TAMBRALLIMATH has been continuing the traditional business, bestowed on me with due respect to knowledge, traditional values of Shastriji’s. I shall continue this journey of spreading the light of knowledge forever and ever.

        ಪಂಡಿತ ಶ್ರೀ ತೋಟಪ್ಪಯ್ಯ ಶಾಸ್ತ್ರೀಜೀ ಹಿರೇಮಠ ಅವರು ಜ್ಯೋತಿಷ್ಯ, ವೇದಾಂತ, ಆರ್ಯುವೇದ ಶಾಸ್ತ್ರಗಳಲ್ಲಿ ಅಪಾರವಾದ ಜ್ಞಾನ, ಅನುಭವ ಹೊಂದಿ ಇವುಗಳನ್ನು ಗ್ರಂಥ ರೂಪದಲ್ಲಿ ಸಾಮಾನ್ಯ ಜನರಿಗೂ ಸುಲಭ ರೀತಿಯಲ್ಲಿ ಅರ್ಥವಾಗುವಂತೆ ಬರೆದು ಪ್ರಕಟಣೆ ಮಾಡಿದವರು.

       ಶ್ರೀ ತೋಟಪ್ಪಯ್ಯ ಶಾಸ್ತ್ರೀಜೀಯವರು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ತಂಬ್ರಳ್ಳಿ ಗ್ರಾಮದ ತೆಗ್ಗಿನಕೇರಿ ಹೀರೆಮಠದ ಪೀಠಾಧ್ಯಕ್ಷರು ಆದ ವೇದಮೂರ್ತಿ ಮಹಾಂತಪ್ಪಯ್ಯನವರ ಏಕೈಕ ಸುಪತ್ರರಾಗಿ ದಿನಾಂಕ: 21.11.1900 ರಲ್ಲಿ ತಂಬ್ರಳ್ಳಿಯಲ್ಲಿ ಜನಿಸಿದರು. ಇವರು ಅತಿ ಕಿರಿಯ ವಯಸ್ಸಿನವರಿದ್ದಾಗ ತಾಯಿಯವರು ತೀರಿಕೊಂಡರು. ನಂತರ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ತೆರಳಿ ಅಲ್ಲಿ ಜ್ಯೋತಿಷ್ಯ, ವೇದಾಂತ, ವೈದ್ಯ ಹೀಗೆ ಅನೇಕ ವಿಷಯಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದು, ತಾವು ಸಂಪಾದಿಸಿದ ಜ್ಞಾನ, ಅನುಭವಗಳನ್ನು ಪುಸ್ತಕರೂಪದಲ್ಲಿ ಬರೆದು, ತಮ್ಮ 18ನೇಯ ವಯಸ್ಸಿನಲ್ಲಿ ಗದಗದಲ್ಲಿ ಸ್ವಂತ ತೋಂಟದಾರ್ಯ ಮುದ್ರಣಾಲಯ ಸ್ಥಾಪಿಸಿ ಅದರಲ್ಲಿ ಅನೇಕ ಗ್ರಂಥಮಾಲಿಕೆಗಳನ್ನು ಪ್ರಕಟಪಡಿಸಿ ಸಾಮಾನ್ಯ ಜನರಿಗೆ ತಲುಪಿಸಿದರು. ಈ ಮುದ್ರಣಾಲಯವು ಮುಂದೆ ತೋಂಟದಾರ್ಯ ಬುಕ್-ಡೀಪೋ ಎಂದು ನಾಮಕರಣವಾಗಿ ಇಂದಿನವರೆಗೂ ಈ ಗ್ರಂಥಗಳನ್ನು ಮರು ಮುದ್ರಿಸಿ ರಾಜ್ಯಾದಾದ್ಯಂತ ಪ್ರಚುರ ಪಡಿಸಿದೆ.

       1940ರಲ್ಲಿ ಶ್ರೀಮತಿ ವಿಶಾಲಾಕ್ಷಾಂಬಾತಾಯಿ ತಂಬ್ರಳ್ಳಿಮಠ ಸಾ|| ಕಂಪ್ಲಿ ಎಂಬುವರನ್ನು ವಿವಾಹವಾಗುತ್ತಾರೆ. ಶಾಸ್ತ್ರೀಜೀಯವರು ಜ್ಯೋತಿಷ್ಯ, ವೇದಾಂತ, ಆರ್ಯುವೇದಗಳ ಸಕಲ ಕಾರ್ಯಗಳಲ್ಲಿ ಬೆನ್ನಲುಬಾಗಿ ನಿಂತು, ಶಾಸ್ತ್ರೀಜೀಯವರು ಪಡೆದಂತಹ ಯಶಸ್ಸಿನ ಶಿಖರಕ್ಕೆ ಎಳ್ಳಷ್ಟು ಸಹ ದಕ್ಕೆಯಾಗದಂತೆ ಜೀವನ ಪೂರ್ತಿ ಸಹಕಾರ ನೀಡಿದರು. ಈ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು ಜನಿಸಿದರು. ಇವರ ಜೇಷ್ಠ ಸುಪುತ್ರಿ ಶಶಿರೇಖಾ ಅವರನ್ನು ತಾಯಿ ಶ್ರೀಮತಿ ವಿಶಾಲಾಕ್ಷಾಂಬಾತಾಯಿ ತಮ್ಮ ತಮ್ಮನಾದ ಶ್ರೀ ರೇವಣಸಿದ್ದೇಶ್ವರ ಚನ್ನಬಸಯ್ಯ ತಂಬ್ರಳ್ಳಿಮಠ ಅವರಿಗೆ ಧಾರೇ ಎರೆದು ಕೊಟ್ಟರು. ಅವರ ನಂಬಿಕೆಯಂತೆ ಶ್ರೀ ರೇವಣಸಿದ್ದೇಶ್ವರ ಚನ್ನಬಸಯ್ಯ ತಂಬ್ರಳ್ಳಿಮಠ ರವರು ಶಾಸ್ತ್ರೀಜೀಯವರ ಎಲ್ಲಾ ಕನಸುಗಳನ್ನು ಸಾಕರಗೊಳಿಸಿದರು. ಇವರ ದ್ವಿತೀಯ ಸುಪುತ್ರಿ ಡಾ|| ಜಯಶ್ರೀ ಇವರನ್ನು ಡಾ|| ಚಂದ್ರಕಾಂತ ಕೊಡ್ಲಿಮಠ ಅವರಿಗೆ ಧಾರೇ ಎರೆದು ಕೊಟ್ಟರು ಹಾಗೂ ಕೊನೆಯ ಮುದ್ದಿನ ಮಗಳಾದ ನಿತ್ಯಮಂಗಲಾ ಇವರನ್ನು ಶ್ರೀ ಗದಗೇಶ ಪಾಟೀಲ ಸಾ|| ಯತ್ತಿನಹಳ್ಳಿ ಅವರಿಗೆ ತುಂಬು ಮನಸ್ಸಿನಿಂದ ಧಾರೆ ಎರೆದು ಕೊಟ್ಟರು.

    ಈ ಮೂರು ಮಕ್ಕಳು ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡು ತಮ್ಮ ತಮ್ಮ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ತಾಯಿ ಶ್ರೀಮತಿ ವಿಶಾಲಾಕ್ಷಾಂಬಾತಾಯಿ ಹಿರೇಮಠರವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಶಾಸ್ತ್ರೀಜೀಯವರನ್ನು ಮದುವೆಯಾದ ನಂತರ ಶ್ರೀಮತಿ ವಿಶಾಲಾಕ್ಷಾಂಬಾತಾಯಿ ಹಿರೇಮಠ ರವರು ಪತಿಯೊಂದಿಗೆ ಜೊತೆಗೂಡಿ ಕೈಗೊಂಡ ಜ್ಯೋತಿಷ್ಯ, ವೇದಾಂತ, ಆರ್ಯುವೇದಗಳ ಸಕಲ ಕಾರ್ಯಗಳಿಂದಾಗಿ ಶಾಸ್ತ್ರೀಜೀಯವರಿಗೆ ಎಲ್ಲಿಲ್ಲದ ಕೀರ್ತಿಪತಾಕೆ ಮತ್ತು ಸನ್ಮಾನಗಳು ಪ್ರಾಪ್ತಿಯಾದವು.  ಶಾಸ್ತ್ರೀಜೀಯವರು 1953ರಲ್ಲಿ ತಮ್ಮ ವೈದ್ಯಕೀಯವನ್ನು The Board of Ayurvedic and Unani Tibbi Systems of Medicine, Bombay ನಲ್ಲಿ ನೊಂದಾಯಿಸಿದರು. ಧೈರ್ಯಲಕ್ಷ್ಮೀ, ವಿದ್ಯಾಲಕ್ಷ್ಮೀ ಮತ್ತು ಧನಲಕ್ಷ್ಮೀಯಂತೆ ತಮ್ಮ ಮೂರು ಹೆಣ್ಣು ಮಕ್ಕಳ ಜನನದ ನಂತರ 1960ರಲ್ಲಿ ಶಾಸ್ತ್ರೀಜೀಯವರು ತಮ್ಮ ಕೊನೆ ಉಸಿರಳೆದರು. ಆದರೆ ತಮ್ಮ ಅರಿವು ಇದ್ದಾಗಲೇ ತಮ್ಮ ಪತ್ನಿಯವರಿಗೆ ಎಲ್ಲ ವ್ಯವಹಾರ, ಪಂಚಾಂಗ ವಿದ್ಯೆ ಬಗ್ಗೆ ಪರಿಚಯ ಮಾಡಿಕೊಟ್ಟು, ತಮ್ಮ ಶಾಸ್ತ್ರೀಜೀ ಮನೆತನವನ್ನು ಮುಂದಿನ ಪೀಳಿಗೆಗೂ ಪ್ರಚುರ ಪಡಿಸುವ ಜವಾಬ್ದಾರಿಯನ್ನು ವಹಿಸಿದರು.  ಶ್ರೀ ತೋಟಪ್ಪಯ್ಯ ಶಾಸ್ತ್ರೀಜೀಯವರ ನಂತರ ಶ್ರೀಮತಿ ವಿಶಾಲಾಕ್ಷಾಂಬಾತಾಯಿ ಹಿರೇಮಠರವರು ತಾವೇ ಎಲ್ಲಾ ಶಾಸ್ತ್ರೀಜೀ ಮನೆತನದ ಕಾರ್ಯಭಾರವನ್ನು ನಡೆಸಿಕೊಂಡು ಬಂದರು. ಈ ವಿದ್ಯೆಗೆ ಹೊಸ ರೂಪವನ್ನು ಕಟ್ಟಿಕೊಟ್ಟವರು ಇವರ ಅಳಿಯ ಹಾಗೂ ತಮ್ಮನವರಾದ ಶ್ರೀ ರೇವಣಸಿದ್ದೇಶ್ವರ ತಂಬ್ರಳ್ಳಿಮಠ. ಈ ಶಾಸ್ತ್ರೀ ಮನೆತನದ ಸಂಸ್ಕøತಿ ಹಾಗೂ ಹೆಸರಿಗೆ ಒಂದಿಷ್ಟು ಚುತಿ ಬರದಂತೆ ಹಾಗೆಯೇ ಮುಂದೆ ನಡೆಸಿಕೊಂಡು ಬಂದರು ಎಂದರೆ ಅದಕ್ಕೆ ಕಾರಣ ಶ್ರೀ ರೇವಣಸಿದ್ದೇಶ್ವರ ತಂಬ್ರಳ್ಳಿಮಠ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಶಶಿರೇಖಾ ರೇವಣಸಿದ್ದೇಶ್ವರ ತಂಬ್ರಳ್ಳಿಮಠ.

       ತದನಂತರ ತಮ್ಮ ಅಮ್ಮನ ಹಾಗೂ ಅಪ್ಪನವರು ಹೇಳಿದ ಕಿವಿ ಮಾತನ್ನು ಚಾಚುತಪ್ಪದೇ ಪಾಲಿಸಿ ಜ್ಯೋತಿಷ್ಯ, ವೇದಾಂತ, ಆರ್ಯುವೇದವನ್ನು ಹೊಸ ಲೋಕಕ್ಕೆ ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿರುವರು ಶ್ರೀ ರೇವಣಸಿದ್ದೇಶ್ವರ ತಂಬ್ರಳ್ಳಿಮಠ ಹಾಗೂ ಇವರ ಧರ್ಮಪತ್ನಿ ಶ್ರೀಮತಿ ಶಶಿರೇಖಾ ರೇವಣಸಿದ್ದೇಶ್ವರ ತಂಬ್ರಳ್ಳಿಮಠರವರ ಪುತ್ರನಾದ ಶ್ರೀ ಪ್ರಶಾಂತ ರೇವಣಸಿದ್ದೇಶ್ವರ ತಂಬ್ರಳ್ಳಿಮಠ.

       ಅಂದಿನಿಂದ ಇಂದಿನವರೆಗೂ “ಜ್ಞಾನವೇ ಜ್ಯೋತಿ ಅಜ್ಞಾನವೇ ಕತ್ತಲು” ಎಂಬಂತೆ, ಜನಸಾಮಾನ್ಯನಿಗೂ ಇದರ ಜ್ಞಾನ ದೊರೆಯಲೆಂದು ಹಗಲಿರುಳು ಶ್ರಮ ವಹಿಸಿ, ಕಾಯಕ ಯೋಗಿಯಂತೆ ಶಾಸ್ತ್ರೀಜೀಯವರ ಕನಸನ್ನು ನನಸು ಮಾಡುತ್ತಿದ್ದಾರೆ.