AUTHOR

ಲೇಖಕರು

ಸನ್ಮಾನ್ಯರೇ,

ನಮ್ಮ ಅಸಲೀ (ನಿಜ) ಬಸವೇಶ್ವರ ಪಂಚಾಂಗಗಳು
ಹಾಗೂ
ಶ್ರೀ ಮೃತ್ಯುಂಜಯ ವರ್ಷ- ಭವಿಷ್ಯ

      ಈ ವಿಷಯದಲ್ಲಿ ಇದುವರೆಗೆ ವಿಶ್ವಾಸ ತೋರಿಸುತ್ತಿರುವ ನಿಜ ಅಭಿಮಾನವನ್ನು ನಾವು ನಿಮ್ಮ ಆನಂದ, ಆರೋಗ್ಯ, ಐಶ್ವರ್ಯಾದಿಗಳ ಪುರೋವೃದ್ಧಿಗಾಗಿ ಸದಾ ಚಿಂತಿಸುತ್ತಿರುವೆವು ಅಸ್ತು. ನಮ್ಮೀ ಪಂಚಾಂಗ ಭವಿಷ್ಯಗಳಲ್ಲಿ ಈ ವರ್ಷ ಅನೇಕ ಸುಧಾರಣೆಗಳನ್ನು ಮಾಡಿ ವರ್ತಕರಿಗೂ, ಒಕ್ಕಲಗರಿಗೂ, ಗೃಹಸ್ಥರಿಗೂ ಅನುಕೂಲಿಸತಕ್ಕ ಶ್ರೇಷ್ಠ ವಿಷಯಗಳನ್ನು ಕ್ರೊಢೀಕರಿಸಿ ಬರೆದಿದ್ದೇವೆಂಬ ಭರವಸೆಯನ್ನು ಕೊಡುವೆವು.

      ನಮ್ಮ ಗದಗ ಅಸಲೀ (ನಿಜ) ಬಸವೇಶ್ವರ ಪಂಚಾಂಗಗಳು 98 ವರ್ಷಗಳ ಜನತೆಯ ಪ್ರೇಮಾದರಕ್ಕೆ ಪಾತ್ರವಾಗಿದ್ದು, ಸಮಸ್ತ ಪಾಂಡಿತ್ಯ ಪ್ರಭುತಿಗಳ ಹೊಗಳಿಕೆಗೆ ಬದ್ಧವಾಗಿರುತ್ತೇವೆ ಎಂಬ ನಿಜ ವಿಚಾರವನ್ನರಿತ ನಿಮ್ಮ ಹೆಚ್ಚಿನ ಅರಿಕೆ ಮಾಡಿಕೊಳ್ಳುವದೇನಿದೆ ಸತ್ವಪರೀಕ್ಷೆಗೆ ಸದಾ ಪರಮೇಶ್ವರನ ಸಲಹೆ, ಸಮ್ಮುಖದಲ್ಲಿರುತ್ತದೆಂಬುದನ್ನು ಮರೆಯಲಾರದಿಷ್ಟೇ, ಅಸತ್ಯವನ್ನು ಅಲ್ಲಗಳೆಯುವದರಲ್ಲಿ ಅಗದೀ ಮುಂದಾಳುತನವನ್ನು ವಹಿಸಿರಿ. ಜನರ ವಿಶ್ವಾಸವೇ ಧನಪ್ರಾಪ್ತಿಯ ಮೂಲ ಸೆಲೆಯು.

ನಿಮ್ಮ ನಿರಂತರ ಹಿತಚಿಂತಕರು

ಶ್ರೀಮತಿ ವಿಶಾಲಾಕ್ಷಾಂಬಾತಾಯಿ
ಪಂಡಿತ, ವೇ. ತೋಟಪ್ಪಯ್ಯ ಶಾಸ್ತ್ರೀಜೀ ಹಿರೇಮಠ
ಗದಗ